ಜಾಸ್ತಿ ತಿಳಿದಂತೆ ಆ ಜ್ಞಾನದ ಬಗ್ಗೆ ಇತರರಿಗೆ ಸಮರ್ಪಕವಾಗಿ ವಿವರಿಸಲು ಆಗದೆ ಇರುವುದು.
ನಾವೆಲ್ಲಾ ಒಂದಲ್ಲ ಒಂದು ವಿಷಯದಲ್ಲಿ ಪರಿಣತರಾಗಿರುತ್ತೇವೆ. ಪರಿಣತರಾಗುವುದೆಂದರೆ, ಆಸಕ್ತಿಯಿಂದ ಆ ವಿಷಯದ ಸೂಕ್ಷ್ಮತೆ ಮತ್ತು ಸಂಕೀರ್ಣತೆಯನ್ನು ಆಳವಾಗಿ ತಿಳಿಯುತ್ತ ಹೋಗುವುದು. ಹೀಗೆ ಹೆಚ್ಚು ಹೆಚ್ಚು ತಿಳಿದಂತೆ, ಆ ವಿಷಯ ಗೊತ್ತಾವುದಕ್ಕೂ ಮೊದಲಿನ ಸ್ಥಿತಿಯನ್ನು ಮರೆತು ಬಿಡುತ್ತೇವೆ, ಗೊತ್ತಿಲ್ಲದಿದ್ದರೆ ಹೇಗಿರುತ್ತದೆ ಎಂದು ಕಲ್ಪಿಸಿಕೊಳ್ಳಲೂ ಆಗದೆ ಮತ್ತದರಿಂದ ಆ ವಿಷಯದ ಬಗ್ಗೆ ಇತರರ ಅಲ್ಪ ಜ್ಞಾನವನ್ನು ಗುರುತಿಸಲಾರದೆ ಜ್ಞಾನದ ಶಾಪಕ್ಕೆ ಒಳಗಾಗುತ್ತೇವೆ.
ಇತರರಿಗೆ ವಿಷಯದ ಬಗ್ಗೆ ಮೊದಲೇ ತಿಳಿದಿದೆ ಎಂಬ ತಪ್ಪು ಕಲ್ಪನೆಯಿಂದ ಹೀಗಾಗುತ್ತದೆ.
ಇದರಿಂದ ನಾವು ತಿಳಿದಿರುವುದನ್ನು ಎಷ್ಟೇ ವಿವರಿಸಿದರೂ ಇತರರಿಗೆ ಅರ್ಥವಾಗದೆ ಇರುವುದನ್ನು ನೋಡಿ ಹತಾಶರಾಗುತ್ತೇವೆ. ಕೆಲಸದಲ್ಲೊ ಅಥವಾ ಇನ್ನೆಲ್ಲೋ ಈ ರೀತಿಯ ಅನುಭವ ಆಗಾಗ ಆಗುತ್ತಿರುತ್ತದೆ.
ಮನಶಾಸ್ತ್ರ ಪ್ರಯೋಗವೊಂದರಲ್ಲಿ ಮೂರು ವರ್ಷದ ಮಗುವಿಗೆ ಒಂದು ಚಾಕಲೇಟ್ ಬಾಕ್ಸನ್ನು ನೀಡಲಾಯಿತು. ಮಗು ತಕ್ಷಣ ಅದನ್ನು ತೆರೆದು ನೋಡಿದರೆ, ಅದರಲ್ಲಿ ಚಾಕಲೇಟ್ಗಳ ಬದಲು ರಿಬ್ಬನ್ ತುಂಬಿತ್ತು. ಈ ಸಂಧರ್ಭದಲ್ಲಿ ಕೋಣೆಗೆ ಇನ್ನೊಂದು ಮಗುವನ್ನು ತರಲಾಯಿತು. ಈಗ ಮೊದಲನೇ ಮಗುವಿನಲ್ಲಿ, ಎರಡನೇ ಮಗುವು ಚಾಕಲೇಟ್ ಡಬ್ಬಿಯಲ್ಲಿ ಏನಿದೆ ಅಂತ ತಿಳಿದಿದೆ? ಎಂದು ಕೇಳಿದಾಗ “ಮತ್ತೇನು ರಿಬ್ಬನ್ “ ಎಂಬ ಉತ್ತರ ಕೊಟ್ಟಿತು. ಹಾಗಾದರೆ ನಿನಗೆ ಮೊದಲು ಬಾಕ್ಸನ್ನು ಕೊಟ್ಟಾಗ ಏನಿದೆ ಎಂದು ತಿಳಿದಿದ್ದೆ? ಎಂದು ಕೇಳಿದಾಗ “ರಿಬ್ಬನ್” ಎಂಬ ಉತ್ತರ ಬಂತು.
ಒಮ್ಮೆ ಏನು ಎಂದು ತಿಳಿದ ಮೇಲೆ ಮೊದಲಿನ ಸ್ಥಿತಿಯ ಅರಿವನ್ನೇ ಮರೆಯುತ್ತೇವೆ ಎಂಬದನ್ನು ಈ ಪ್ರಯೋಗ ಪ್ರಮಾಣಿಸುತ್ತದೆ. ವಯಸ್ಕರು ಇಂತಹ ಪ್ರಯೋಗದಲ್ಲಿ ಮಕ್ಕಳಿಗಿಂತ ಉತ್ತಮವಾಗಿ ನಿರ್ವಹಿಸಿದರೂ ಇತರ ಅನೇಕ ಅಧ್ಯಯನಗಳು ವಯಸ್ಕರಲ್ಲಿಯೂ ಜ್ಞಾನದ ಶಾಪದ ಪರಿಣಾಮಗಳು ಇವೆ ಎಂದು ದೃಢ ಪಡಿಸಿವೆ.