ಒಬ್ಬ ವ್ಯಕ್ತಿಯ ವ್ಯಕ್ತಿತ್ವ ದ ಯಾವುದಾದರೂ ಒಂದು ಗುಣ ಲಕ್ಷಣದಿಂದ ನಾವು ಪ್ರಭಾವಿತರಾದರೇ ಆತನ ಇನ್ನಿತರ ಗುಣಲಕ್ಷಣಗಳು ಒಳ್ಳೆಯದೇ ಇರಬೇಕೆಂದು ತಪ್ಪಾಗಿ ಗ್ರಹಿಸುವುದು. ಬರೆ ಒಂದು ಗುಣ ಲಕ್ಷಣದ ಆಧಾರದ ಮೇಲೆ ಒಬ್ಬನ ಒಟ್ಟಾರೆ ನಡತೆಯ ಬಗ್ಗೆ ತೀರ್ಮಾನಕ್ಕೆ ಬಂದು ಬಿಡುವುದು.
ಉದಾಹರಣೆಯಾಗಿ ಒಬ್ಬ ವ್ಯಕ್ತಿ ನೋಡಲು ಸುಂದರನಾಗಿದ್ದರೆ ಆತ ಒಟ್ಟಾರೆಯಾಗಿ ಒಳ್ಳೆಯನಾಗಿರಬೇಕೆಂಬ ನಮ್ಮ ಅನಿಸಿಕೆ. ಒಬ್ಬ ವ್ಯಕ್ತಿಯ ಆದ್ಯತೆಗಳು, ಪೂರ್ವಾಗ್ರಹಗಳು, ಸಿದ್ಧಾಂತಗಳು ಮತ್ತು ಸಾಮಾಜಿಕ ದ್ರಷ್ಟಿಕೋನಗಳಿಂದ ಈ ರೀತಿ ತೀರ್ಮಾನಗಳಲ್ಲಿ ದೋಷ ಉಂಟಾಗುತ್ತದೆ.
ಬರೀ ವ್ಯಕ್ತಿಗಳಿಗಷ್ಟೇ ಅಲ್ಲದೆ ಕಂಪನಿ, ಬ್ರಾಂಡ್, ಅಥವ ಇನ್ನಾವುದೇ ವಸ್ತು ಗಳಿಗು ಇದು ಅನ್ವಯವಾಗುತ್ತದೆ.
ಮಾರ್ಕೆಟಿಂಗ್ ವಲಯದಲ್ಲಿ ಈ ಪರಿಣಾಮವನ್ನು ಬಳಸಿಕೊಂಡು ಒಂದು ಜನಪ್ರಿಯ ಉತ್ಪನ್ನದ “ಬ್ರಾಂಡ್” ಅನ್ನೇ ಉಪಯೋಗಿಸಿ ಅದಕ್ಕೆ ಸಂಭಂದಪಟ್ಟ ಇತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಲಾಭ ಪಡೆಯುತ್ತಾರೆ. (line extensions) ಒಂದು ಖ್ಯಾತ ಶಾಂಪೂ ಬ್ರಾಂಡ್ ನ ಹೆಸರಿನಲ್ಲಿಯೇ ಸೋಪ್ ದೊರಕುವುದನ್ನು ನೀವು ಗಮನಿಸಿರಬಹದು. ನೂಡಲ್ಸ್ ಗೆ ಹೆಸರಾಗಿರುವ ಮ್ಯಾಗಿಯ ಬ್ರಾಂಡ್ ನಲ್ಲಿ ಈಗ ಕೆಚಪ್, ಪಾಸ್ಟಾ, ಸೂಪ್ ಕೂಡ ದೊರೆಯುತ್ತದೆ.
ಪಸರಿಸುವ ಪ್ರಭಾವಲಯದ ಬಗ್ಗೆ ನಮಗೆ ಅರಿವಿದ್ದಲ್ಲಿ ನಮ್ಮ ಜೀವನದಲ್ಲಿ ಅದು ಉಂಟುಮಾಡುವ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬಹುದು. ಯಾವುದೇ ನಿರ್ಧಾರ ಮಾಡುವ ಮೊದಲು ಆ ವಿಷಯದ ಬಗ್ಗೆ ಇರುವ ನಮ್ಮ ಅನಿಸಿಕೆಗಳು ಹೇಗೆ ಇತರ ಮಾನದಂಡಗಳ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ಪರಿಗಣಿಸಬಹುದು. ಇದರಿಂದ ನಾವು ಉತ್ತಮ ನಿರ್ಧಾರಗಳನ್ನು ಮಾಡಲು ಸಹಾಯವಾಗುತ್ತದೆ.