ನಾವು ಪ್ರತಿದಿನ ಅನೇಕ ನಿರ್ಧಾರಗಳನ್ನ ಮಾಡುತ್ತಲೇ ಇರುತ್ತೇವೆ. ಅದು ಯಾವ ತಿಂಡಿ ತಿನ್ನಬೇಕು, ಎಲ್ಲಿಗೆ ಪ್ರಯಾಣ ಮಾಡಬೇಕು, ಯಾವ ಬ್ರಾಂಡ್ ನ ವಸ್ತುಗಳನ್ನು ಖರೀದಿಸಬೇಕು, ಯಾರನ್ನು ಬಾಳ ಸಂಗಾತಿ ಯಾಗಿ ಮಾಡಿಕೊಳ್ಳಬೇಕು, ಹೀಗೆ ಜೀವನದ ಪ್ರತಿಕ್ಷಣವು ನಿರ್ಧಾರ ಮಾಡುತ್ತಲೇ ಇರುತ್ತೇವೆ. ಈ ನಿರ್ಧಾರಗಳ ಪರಿಣಾಮಗಳು ಕೆಲವೊಮ್ಮೆ ಗಂಭೀರ ಸ್ವರೂಪದ್ದಲ್ಲದ್ದಿದ್ದರೂ ಮತ್ತು ಕೆಲವೊಮ್ಮೆ ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸುವಂತಹವಾಗಿರುತ್ತವೆ. “ನಮ್ಮ ಎಲ್ಲಾ ಆಯ್ಕೆಗಳು ಕೂಡಿ ಈ ಜೀವನವಾಗಿದೆ” ಎಂದು ಆಲ್ಬರ್ಟ್ ಕಾಮು ಅವರು ಹೇಳಿದಂತೆ ಮದುವೆ, ಉನ್ನತ ಶಿಕ್ಷಣ, ವೃತ್ತಿ, ಹಣಕಾಸಿನ ಹೂಡಿಕೆ ಇತ್ಯಾದಿ ವಿಚಾರಗಳಲ್ಲಿ ನಮ್ಮ ನಿರ್ಣಯಗಳು ಬಹಳ ಮುಖ್ಯ.
ನಿರ್ಧರಿಸುವುದು ಅಷ್ಟು ಸುಲಭವೇನೂ ಅಲ್ಲ. ಇದೇ ಕಾರಣಕ್ಕಾಗಿ ನಾವು ಆಗಾಗ ಕೆಲವು ಒಳದಾರಿಗಳನ್ನು ಗೊತ್ತಿಲ್ಲದೆಯೇ ಬಳಸುತ್ತಿರುತ್ತೇವೆ. ಬೇರೆಯವರು ಆರ್ಡರ್ ಮಾಡಿದ್ದನ್ನೇ ತನಗೂ ಇರಲಿ ಎಂದು ಹೇಳುವುದು, ಒಂದು ಚಿಕ್ಕ ಉದಾಹರಣೆ.
ಈ ಭಾಗದಲ್ಲಿ ನಿರ್ಧಾರಕ್ಕೆ ಸಂಬಂಧಿಸಿದಂತೆ ಅನೇಕ ಉಪಯುಕ್ತ ಆಧುನಿಕ ವೈಜ್ಞಾನಿಕ ಮಾಹಿತಿಗಳ ಬರಹಗಳನ್ನು ಓದಿ.
10ಮುಖಗಳು ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳು ಅಥವಾ ನಿಮ್ಮ ಬರಹಗಳನ್ನು [email protected] ಗೆ ಕಳುಹಿಸಿಕೊಡಿ
ಹೊಸ ಲೇಖನಗಳು, ವಿಜ್ಞಾನದ ಬರಹಗಳು, ಸ್ಪೂರ್ತಿದಾಯಕ ಕಥೆಗಳು, ಹಾಗೂ ಇನ್ನಿತರ ಆಸಕ್ತಿದಾಯಕ ವಿಷಯಗಳನ್ನು ಹದಿನೈದು ದಿನಕ್ಕೊಮ್ಮೆ ನೇರವಾಗಿ ನಿಮ್ಮ ಇಮೇಲ್ ನಲ್ಲಿ ಪಡೆಯಲು ನಿಮ್ಮ ಇಮೇಲ್ ವಿಳಾಸ ನೀಡಿ.
10ಮುಖಗಳು ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳು ಅಥವಾ ನಿಮ್ಮ ಬರಹಗಳನ್ನು [email protected] ಗೆ ಕಳುಹಿಸಿಕೊಡಿ